Sunday, May 23, 2010

ಲವಲVKಯಿಂದ ಶಾಕ್!

17 ಮೇ 2010

ಮೊದಲೇ ಶಿರಸಿ - ಬೆಂಗಳೂರು ಬಸ್ಸ್ ತಲುಪುವುದು ತಡವಾಗಿತ್ತು.ಪ್ರಯಾಣದ ಆಯಾಸ ಮತ್ತು ನಿದ್ರೆಯ ಗುಂಗಿನಲ್ಲಿದ್ದೆ.ಆಫೀಸಿಗೆ ಹೋಗುವ ಆಳು ಲೆಕ್ಕ ಬಾಕಿ ಇತ್ತು.ಅಂತು ಮನೆ ತಲುಪಿದ್ದೆ.

ಆಲ್ಲೆ ಇದ್ದ ದಿನ ಪತ್ರಿಕೆ "ವಿಜಯ ಕರ್ನಾಟಕ"ದ ಪುಟಗಳನ್ನ ಮಗುಚಿದೆ, ಜೊತೆಗೆ "ಲವಲVK"ಯ ಪುಟಗಳನ್ನೂ.ಮೊದಲ ಪುಟದಲ್ಲಿ ಹಲಸಿನ ಲೇಖನ ... ಮುಂದಿನ ಪುಟಗಳನ್ನು ನೋಡುತ್ತಾ ಹೊದೆ.ನಿದ್ರೆಯ ಗುಂಗಿನಲ್ಲಿದ್ದ ನನಗೆ ಶಾಕ್ ಆಗಿತ್ತು!!!.ಮತ್ತೆ ಮತ್ತೆ ಅದೆ ಪುಟದ ಕೋಕಂ (Cocum) ಚಿತ್ರಗಳನ್ನ ನೋಡಿದೆ.ಸಂಶಯವಿರಲಿಲ್ಲ ಇದು ನಾನು ತೆಗೆದ ಫೋಟೋನೆ.


"ವಿಜಯ ಕರ್ನಾಟಕ" ಇ-ಪೇಪರ್ 17 ಮೇ 2010 | ಪುಟ-5 ಮತ್ತು ಲೇಖನ

ಇದಕ್ಕು ಮೊದಲು ಕೋಕಂ ಚಿತ್ರ ಸಹಿತ ಲೇಖನವನ್ನ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ.ಚಿತ್ರಗಳನ್ನ ಕ್ರಾಪ್ ಮತ್ತು ಗ್ರಾಫಿಕ್ಸನಲ್ಲಿ ತಿದ್ದಲಾಗಿತ್ತು.ಚಿತ್ರದ ಬಗ್ಗೆ ನಮೂದಿಸಿದ್ದರಾ ನೋಡಿದೆ. ಇಲ್ಲಾ!? ನಾನು ಈ ಚಿತ್ರಗಳನ್ನು ಬ್ಲಾಗ್ ನಲ್ಲಿ ಬಿಟ್ಟರೆ ಬೇರೆಲ್ಲೂ ಕಳುಹಿಸಿರಲಿಲ್ಲ ಅಥವಾ ಅನುಮತಿಯನ್ನೂ ಕೊಟ್ಟಿರಲಿಲ್ಲ.ಒಂದು ಕಡೆ ಫೋಟೊ ಪ್ರಕಟಗೊಂಡಿದ್ದಕ್ಕೆ ಖುಷಿ ಇದ್ದರೆ ಇನ್ನೊಂದು ಕಡೆ ಫೋಟೊ ಅನುಮತಿ ಇಲ್ಲದೆ ಪ್ರಕಟಿಸಿದ್ದರ ಬಗ್ಗೆ ಖೇದವಿತ್ತು.

ದೂರವಾಣಿ ಮತ್ತು ಲಿಖಿತವಾಗಿ ದೂರು ನೀಡುವುದೆಂದು ತೀರ್ಮಾನಿಸಿ ಸಂಜೆ ಆಫೀಸಿನಿಂದ ಬರುವ ಹೊತ್ತಿಗೆ ಎಲ್ಲ ಮುಗಿಸಿದೆ.ನಂತರ ಲವಲVKಯ ಸಂಪಾಕರು, ಆಗಿರುವ ಲೋಪವನ್ನು ಒಪ್ಪಿ ಮುಂದಿನ ದಿನದ ಪ್ರತಿಯಲ್ಲಿ ಪ್ರಕಟಿಸುತ್ತೆವೆಂದು ಹೇಳಿ ಪ್ರಕಟಿಸಿದ್ದಾರೆ.


"ವಿಜಯ ಕರ್ನಾಟಕ" ಇ-ಪೇಪರ್ 18 ಮೇ 2010 | ಪುಟ-4 ಮತ್ತು ಲೇಖನ

ಒಟ್ಟಿನಲ್ಲಿ "ಲವಲVKಯಿಂದ ಶಾಕ್!" ಪ್ರಕರಣ ಸುಖಾಂತ್ಯ ಕಂಡಿದೆ.

ಕೊನೆಯ ಮಾತು : ಯುವ ಬರಹಗಾರರು ಯಾವುದೇ ಚಿತ್ರಗಳನ್ನ ಅಂತರಜಾಲ (Internet) ನಿಂದ ಪಡೆಯುವುದ್ದಿದ್ದಲ್ಲಿ ಹಕ್ಕುದಾರರ ಪೂರ್ವ ಅನುಮತಿ ಪಡೆದರೆ, ಅವರ ಶ್ರಮಕ್ಕೆ ಒಂದು ಗೌವರವ ಮತ್ತು ಕಾನೂನು ರೀತಿಯಿಂದಲು ಉತ್ತಮ.

ಚಿತ್ರಗಳನ್ನು "ವಿಜಯ ಕರ್ನಾಟಕ" ಇ-ಪೇಪರ್ ನಿಂದ ಪಡೆಯಲಾಗಿದೆ.