Saturday, March 13, 2010

ಹೀಗೂ ಊಂಟೆ?

ಅದು ಪ್ರತಿ ದಿನ ಮುಂಜಾನೆ ಬಸ್ಸಿಗೆ ನಿಲ್ಲುವ ಜಾಗ.ಅಲ್ಲೆ ಒಂದು ಸಣ್ಣ ಮಟ್ಟಿ ಇದೆ.
ಕೆಲ ಸಣ್ಣ ಹಕ್ಕಿಗಳು ಅಲ್ಲೆ ಚಿಲಿ ಪಿಲಿ ಮಾಡುವದರಿಂದ ನಿಂತಾಗೆಲ್ಲ ಅಲ್ಲಿ ಗಮನಿಸುವುದುಂಟು.
ಒಂದು ದಿನ ಗಮನಿಸಿದಾಗ ನರಿ ಬಾಲದ ಹುಲ್ಲು ಅಥವಾ Fountain Grass ಬೇರೆಯಾಗಿ ಕಾಣಿಸಿತು.ಹತ್ತಿರ ಹೋಗಿ ಗಮನಿಸಿದೆ.ಹುಲ್ಲಿನ ಬೀಜದ ಜೊತೆಗೆನೆ ಸಣ್ಣ ಸಣ್ಣ ಸಸಿ ಇದೆ! ಕೆಳಗಿನ ಚಿತ್ರ ನೋಡಿ.

ಸಾಮಾನ್ಯವಾಗಿ ಕಾಣುವ Fountain Grass

ಸಸಿಗಳೊಂದಿಗೆ  Fountain Grass

ಸಾಮಾನ್ಯವಾಗಿ ಹುಲ್ಲಿನ ಬೀಜ ಬೆಳೆದ ಮೇಲೆ ಗಾಳಿಯಲ್ಲಿ ಬೀಜ ಪ್ರಸರಣವಾಗುವುದನ್ನು ನೋಡಿದ್ದೇನೆ.ಕೈ ತೋಟದಲ್ಲಿ ಕೆಲವು ಜಾತಿಯ ಚೆಂಡು ಹೂಗಳಿಗೆ ಇದೆ ಥರ ಸಸಿ ಹುಟ್ಟುವದನ್ನು ನೋಡಿದ್ದೇನೆ.ಏಕೆ ಹೀಗಾಗಿರಬಹುದು ಎಂದು ಅವಲೋಕಿಸಿದೆ.ಸ್ವಲ್ಪ ಧೂಳು ಮತ್ತು ನೀರಿನಿಂದ ತೇವಗೊಂಡಿತ್ತು.ಹೊಸ ರಸ್ತೆಯ ಮಣ್ಣಿನ ಧೂಳು ಮತ್ತು ವಾರದಿಂದ ರಾತ್ರಿಯೆಲ್ಲ ಮಳೆಯಾಗುತ್ತಿತ್ತು.ಮಣ್ಣು ಮತ್ತು ನೀರು ಸಿಕ್ಕಿದ್ದರಿಂದ ಅಲ್ಲೆ ಸಸಿಯಾಗಿದೆ!
ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಇಂಥ ಅನೇಕ ವಿಸ್ಮಯಗಳು ನಡೆಯುತ್ತವೆ.ನೋಡಲು ನಮಗೆ ತಾಳ್ಮೆ ಬೇಕು ಅಷ್ಟೆ.

ಗಿಡವನ್ನು ಕಿತ್ತು ಮನೆಗೆ ತೆಗೆದುಕೊಂಡು ಹೋದೆ.ಗಿಡದ ಆಯುಷ್ಯವು ಮುಗಿಯುವುದರಲ್ಲಿತ್ತು.ಕನ್ನಡ ನ್ಯೂಸ್ ಚಾನ್ನೆಲ್ ಕೊಟ್ಟಿದ್ದರೆ ಕಾರ್ಯಕ್ರಮ ಹೇಗೆ ಇರುತ್ತದೆ ಎಂದು ಅನುಕರಣೆ ಮಾಡಿ ನಕ್ಕೆವು :)

ನುಡಿಚಿತ್ರ | nudichitra